ಗಣಿತದಲ್ಲಿ, ಗುಣಾಕಾರ ಕೋಷ್ಟಕವು (ಮಗ್ಗಿ) ಒಂದು ಬೀಜಗಣಿತೀಯ ಪದ್ಧತಿಗಾಗಿ ಗುಣಾಕಾರದ ಕ್ರಿಯೆಯನ್ನು ವ್ಯಾಖ್ಯಾನಿಸಲು ಬಳಸಲಾದ ಗಣಿತೀಯ ಕೋಷ್ಟಕ/ಪಟ್ಟಿಯಾಗಿರುತ್ತದೆ. ಸಾಂಪ್ರದಾಯಿಕವಾಗಿ ದಶಮಾನ ಗುಣಾಕಾರ ಕೋಷ್ಟಕವನ್ನು ವಿಶ್ವದಾದ್ಯಂತ ಪ್ರಾಥಮಿಕ ಅಂಕಗಣಿತದ ಅತ್ಯಗತ್ಯ ಭಾಗವಾಗಿ ಕಲಿಸಿಕೊಡಲಾಗುತ್ತಿತ್ತು, ಏಕೆಂದರೆ ಇದು ಹತ್ತರ ಮೂಲದ ಸಂಖ್ಯೆಗಳ ಅಂಕಗಣಿತೀಯ ಕ್ರಿಯೆಗಳಿಗೆ ಅಡಿಪಾಯ ಹಾಕಿಕೊಡುತ್ತದೆ. ಕೋಷ್ಟಕವನ್ನು 9 × 9 ವರೆಗೆ ಕಂಠಪಾಠ ಮಾಡುವುದು ಅಗತ್ಯವಾಗಿದೆ ಎಂದು ಅನೇಕ ಶಿಕ್ಷಣತಜ್ಞರು ನಂಬುತ್ತಾರೆ. ಕೆಳಗಿನ ಚಿತ್ರವು 12 × 12 ವರೆಗಿನ ಕೋಷ್ಟಕವನ್ನು ತೋರಿಸುತ್ತದೆ. ಈ ಗಾತ್ರವನ್ನು ಸಾಮಾನ್ಯವಾಗಿ ಶಾಲೆಗಳಲ್ಲಿ ಬಳಸಲಾಗುತ್ತದೆ. == ಉಲ್ಲೇಖಗಳು ==